ದೇವಿಕಾರಾಣಿ
(1908-1994). ಭಾರತದ  ಚಲನಚಿತ್ರ ರಂಗದ ಪ್ರಥಮ ಮಹಿಳೆ ಎಂದೇ ಖ್ಯಾತಿಗರಾದ ದೇವಿಕಾರಾಣಿ ಹುಟ್ಟಿದ್ದು ವಾಲ್ಟೇರ್‍ನಲ್ಲಿ.  ಪ್ರಸಿದ್ಧ ಹಾಗೂ ಶ್ರೀಮಂತ ವಂಶದಲ್ಲಿ. ತಾತ ವಿಶ್ವ ಕವಿ ರವೀಂದ್ರನಾಥ ಠಾಕೂರ್. ತಂದೆ ಆಗಿನ  ಮದರಾಸ್ ಪ್ರಾಂತ್ಯದ  ಕರ್ಜನ್ ಆಗಿದ್ದ ಕರ್ನಲ್ ಚೌಧರಿ. ಬಾರತದಲ್ಲಿ ಜನಿಸಿದ್ದರೂ ಬಾಲು ವಿದ್ಯಾಬ್ಯಾಸವೆಲ್ಲ ಲಂಡನ್ನಿನಲ್ಲಿ. ಚಿಕ್ಕಂದಿನಲ್ಲೆ ಅಬಿನಯದಲ್ಲಿ  ಅಬಿರುಚಿ, ಆಸಕ್ತಿ.ಮೆಟ್ರಿಕ್ ಮುಗಿದ ಮೇಲೆ  ಲಂಡನ್ನಿನ ರಾಯಲ್ ಅಕಾಡೆಮಿ ಆಫ್ ಮ್ಯಾಟ್ರಿಕ್ಸ್ ಮತ್ತು ರಾಯಲ್ ಅಕಾಡೆಮಿ ಆಫ್ ಡ್ರಮಾಟಿಕ್ಸ್ ಮತ್ತು ರಾಯಲ್ ಅಕಾಡೆಮಿ ಆಫ್ ಮ್ಯೂಸಿಕ್‍ನಲ್ಲಿ ವಸ್ತ್ರ ವಿನ್ಯಾಸ, ವಾಸ್ತುಶಿಲ್ಪ, ಕಲಾವಿನ್ಯಾಸದ ಬಗೆಗೆ ವಿಶೇಷ ಅಯನ. ಲಂಡನ್ನಿನಲ್ಲಿ ಇದಾಗಲೇ  ಚಿತ್ರ ಬಿರ್ಮಾಣದ ಬಗೆಗೆ ಸೊಗಸಾದ ಕನಸು ಕಟ್ಟಿಕೊಂಡಿದ್ದ  ತರುಣ ಹರಿವಂಶರಾಯ್‍ಪರಿಚಯ. ಅವರ ಚಿತ್ರನಿರ್ಮಾಣ ಸಂಸ್ಥೆಗೆ ಸೇರ್ಪಡೆ. 1929 ರಲ್ಲಿ ಹರಿವಂಶರಾಯ್ ಜೊತೆ ಮದುವೆ. 

ರಾಯ್ ನಿರ್ದೇಶನದಲ್ಲಿ ಸಿದ್ದವಾಗುತ್ತಿದ್ದ ಪ್ರಪಂಚ ಪಾಶ್(ಥ್ರೋ ಆಫ್ ಡ್ರೆಸೆಸ್) ಚಿತ್ರಕ್ಕೆ  ವಸ್ತ್ರಾಲಂಕರಣ ಸಲಹೆಗಾರ್ತಿಯಾಗಿ ನೇಮಕ. ಬ್ರಿಟನ್ನಿನ  ಜಿ,ಎ.ಎಫ್. ಫಿಲಂಸ್‍ನ ಪಾಲುದಾರಿಕೆಯಲ್ಲಿ  ನಿರ್ಮಾಣವಾಗುತ್ತಿದ್ದ ಈ ಚಿತ್ರದ ಪ್ರದರ್ಶನ ಪೂರ್ವ ಸಂಸ್ಕರಣ ಕಾರ್ಯಕ್ಕೆಂದು ಜರ್ಮನಿಗೆ ಹೋಗಿದ್ದಾಗ ಅಲ್ಲಿನ ಯು ಎಫ್ ಎ ಸ್ಟುಡಿಯೋದಲ್ಲಿ ಹಾಲಿವುಡ್‍ನ ಫಿಟ್ಚ್ ಲಾಲಸ್ ಮರ್ಲಿನ್ ಡ್ರಯಟ್ರಚ್, ಮೊದಲಾದ ಪ್ರತಿಭೆಗಳ, ಶ್ರೇಷ್ಠರ ಪರಿಚಯ. ಜೊತೆಗೆ ಚಿತ್ರ ನಿರ್ಮಾಣ ತಂತ್ರಜ್ಞಾನದ  ನಿಕಟ ಪರಿಚಯ. ಪತಿಯೊಂದಿಗೆ  ಭಾರತಕ್ಕೆ ಮರಳಿದ ಮೇಲೆ ಕರ್ಮ (ಇಂಗ್ಲಿಷ್) ನಾಗನ್ ಕಿ ನಾಗಿನ್ (ಹಿಂದಿ ಅವತರಣಿಕೆ) ಯಲ್ಲಿ ರಾಯ್ ಜೊತೆಯಲ್ಲಿ ಪ್ರಧಾನ ಪಾತ್ರಧಾರಿಯಾಗಿ ಅಭಿನಯಿಸುವ ಅವಕಾಶ. ಈ ಚಿತ್ರ ದೇಶ ವಿದೇಶಗಳಲ್ಲಿ ಪ್ರದರ್ಶಿತವಾಗಿ ಜನ ಮೆಚ್ಚುಗೆ ಪಡೆಯಿತು. ಈಕೆಯ ಸೌಂದರ್ಯ, ಲಾವಣ್ಯ ಹಾಗೂ ಪ್ರತಿಭೆ ಎಲ್ಲರ ಮೆಚ್ಚುಗೆಗೆ ಪಾತ್ರವಾದವು. ವಿದೇಶಿ ಚಿತ್ರ ಸಂಸ್ಥೆಗಳಿಂದ ಬಂದ ಕರೆಯನ್ನು ನಿರಾಕರಿಸಿದರು.

1953 ರಲ್ಲಿ ರಾಯ್ ಜೊತೆ ಸೇರಿ ಬಾಂಬೆ ಟಾಕೀಸ್ ಎಂಬ ಚಿತ್ರಸಂಸ್ಥೆ ಕಟ್ಟಿದರು.  ಒಳ್ಳೆಯ ಕಥೆ, ದೃಶ್ಯ, ಸಂಭಾಷಣೆಗಳ ಶುದ್ಧ ಮನೋರಂಜಕ ಚಿತ್ರಗಳನ್ನು ಒದಗಿಸಿದ ಖ್ಯಾತಿ ಈ ಸಂಸ್ಥೆಯದು.  ಈ ಸಂಸ್ಥೆಯ ಮೂಲಕ ತಯಾರಾದ ಹಲವು ಚಿತ್ರಗಳಲ್ಲಿ ಅಚುತ್ ಕನ್ಯಾದಿಂದ ಹಮಾರಿ ಬಾತ್ ವರೆಗಿನ ಹಲವು ಚಿತ್ರಗಳಲ್ಲಿ ಇವರು ಮುಖ್ಯ ಪಾತ್ರ ವಹಿಸಿದಳು.  ಬೆಡಗಿನ ಪಾತ್ರಗಳು, ಸಾಧ್ವಿಯ ಪಾತ್ರಗಳು, ಮುಗ್ಧ ಪಾತ್ರಗಳು ಎಲ್ಲದರಲ್ಲೂ ಪ್ರವೀಣ ಅಭಿನಯ ನೀಡಿದಳು. ಅಜೂತ್ ಕನ್ಯಾ  ಈಕೆಯ ಅಭಿನಯ ಕೌಶಲಕ್ಕೆ ಕಿರೀಟ ಪ್ರಾಯ.  ಪತಿ ಹಿಮಾಂಶು ರಾಯ್ ಅನಿರೀಕ್ಷಿತವಾಗಿ ತೀರಿಕೊಂಡರೂ ಧೃತಿಗೆಡದೇ ಕೆಲಕಾಲ ಬಾಂಬೆ ಟಾಕೀಸ್ ಸಂಸ್ಥೆಯನ್ನು ಮುನ್ನಡೆಸಿದರು. ಅನಂತರ 1945 ರಲ್ಲಿ ತನ್ನ ತಾರಾವೃತ್ತಿಯ ಉನ್ನತ ದೆಸೆಯಲ್ಲಿರುವಾಗಲೇ ಚಿತ್ರರಂಗದಿಂದ ನಿರ್ಗಮಿಸಿದರು.  ಚಿತ್ರರಂಗದಿಂದ ನಿವೃತ್ತರಾದರೂ ಚಿತ್ರ ಕ್ಷೇತ್ರಕ್ಕೆ ಪೂರಕವಾದ ಅನೇಕ ಸಂಘಸಂಸ್ಥೆಗಳಲ್ಲಿ ದುಡಿದರು.  ಇಂಗ್ಲೆಂಡಿನ ಖ್ಯಾತ ಆಕಾಶವಾಣಿ ಸಂಸ್ಥೆ ಬಿ.ಬಿ.ಸಿ.ಯ ಆಹ್ವಾನದ ಮೇರೆಗೆ ಅವರ ಮೊದಲ ಟೆಲಿವಿಷನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೀರ್ತಿ ಈಕೆಯದು.  ಭಾರತದಲ್ಲಿ ಬಿ.ಬಿ.ಸಿ.ಯ ಮೊದಲ ಪ್ರಸಾರವನ್ನು ಉದ್ಘಾಟಿಸಿದ್ದೂ ಈಕೆಯೇ.  ಖ್ಯಾತ ನಟ ಅಶೋಕ್‍ಕುಮಾರನನ್ನು ತೆರೆಗೆ ತಂದ ಖ್ಯಾತಿ ಇವರದು.
ಸೋವಿಯೆತ್ ದೇಶದ ಪ್ರಜೆಯಾಗಿದ್ದು, ಭಾರತದ ನಿವಾಸಿಯಾಗಿದ್ದ ವಿಶ್ವವಿಖ್ಯಾತ ಕಲಾವಿದ, ಪದ್ಮಭೂಷಣ ಸ್ವೆತೋಸ್ಲಾವ್ ರೊರಿಕ್‍ನನ್ನು ಪ್ರೇಮಿಸಿ ಈಕೆ ಎರಡನೇ ವಿವಾಹವಾದರು. ವಿಶ್ವವಿಖ್ಯಾತ ಕಲಾದಂಪತಿಗಳಾದ ಇವರು ಕರ್ನಾಟಕದಲ್ಲಿ ನೆಲೆಸಿದರು.  ಬೆಂಗಳೂರಿಗೆ ಹತ್ತು ಮೈಲಿ ದೂರದಲ್ಲಿರುವ, ದೇವಿಕಾರಾಣಿ ತೋಟ ಎಂದೇ ಜನಪ್ರಸಿದ್ಧವಾಗಿರುವ ತಾತಗುಣಿ ಎಸ್ಟೇಟ್  500 ಎಕರೆ ವಿಶಾಲವಾದ ತೋಟ. ಇಲ್ಲಿ ಪರಿಮಳ ದ್ರವ್ಯ ಸಸ್ಯಗಳ ಬೆಳೆ.

	1970 ರಲ್ಲಿ  ಭಾರತ ಚಲನಚಿತ್ರ ಉದ್ಯಮ ಸಂಸ್ಥಾಪನೆ. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸಂದುದು ಭಾರತದ ಚಲನಚಿತ್ರ ರಂಗದ ಪ್ರಥಮ ಮಹಿಳೆ ದೇವಿಕಾರಾಣಿಗೆ.
(ಎಸ್.ಎಸ್.ಎಂ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ